ಭಾನುವಾರ ಈ ಕುರಿತಾಗಿ ಭಾರತೀಯ ವಾಯು ಪಡೆಗೆ ಮಾಹಿತಿ ಲಭ್ಯವಾದ ಕೂಡಲೇ ರಫೇಲ್ ಯುದ್ಧ ವಿಮಾನಗಳನ್ನು ರವಾನೆ ಮಾಡಲಾಗಿತ್ತು. ಇದೀಗ ಈ ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು, ಮಾಧ್ಯಮಗಳಲ್ಲಿ ಭಾರೀ ಪ್ರಚಾರ ಪಡೆಯುತ್ತಿದೆ. ರಫೇಲ್ ಯುದ್ಧ ವಿಮಾನಗಳು ಭಾನುವಾರ ದಿನವಿಡೀ ಹುಡುಕಾಟ ನಡೆಸಿ ಯುಎಫ್‌ಒಗಳನ್ನು ಪತ್ತೆ ಮಾಡಲು ಶ್ರಮಿಸಿತು ಎಂಬ ಮಾಹಿತಿ ಸಿಕ್ಕಿದೆ.
ಅನ್ಯಗ್ರಹ ಜೀವಿಗಳಿರುವುದು ಸುಳ್ಳಲ್ಲ! ಮೆಕ್ಸಿಕೋ ಸಂಸತ್‌ನಲ್ಲಿ ‘ಏಲಿಯನ್’ಗಳ ಶವ ಪ್ರದರ್ಶನ
ಭಾನುವಾರ ಮಧ್ಯಾಹ್ನ 2.30ರ ಸುಮಾರಿಗೆ ಗುರುತಿಸಲಾಗದ ಹಾರುವ ವಸ್ತುಗಳು (UFO) ಕಂಡು ಬಂದಿತ್ತು ಎಂಬ ಮಾಹಿತಿ ಸಿಕ್ಕಿದೆ. ಹೀಗಾಗಿ, ಇಂಫಾಲ್ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ ಹಾಗೂ ನಿಲ್ದಾಣದಿಂದ ನಿರ್ಗಮಿಸಬೇಕಿದ್ದ ಹಲವು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿತ್ತು. ಪ್ರಯಾಣಿಕ ಹಾಗೂ ಸರಕು ಸಾಗಣೆ ವಿಮಾನಗಳ ಹಾರಾಟದಲ್ಲೂ ವ್ಯತ್ಯಯ ಆಗಿತ್ತು.
ಈ ಕುರಿತಾಗಿ ರಕ್ಷಣಾ ಇಲಾಖೆ ಮೂಲಗಳು ಎಎನ್‌ಐ ಸುದ್ದಿ ಸಂಸ್ಥೆಗೆ ಸಮಗ್ರ ಮಾಹಿತಿ ಲಭ್ಯವಾಗಿದೆ. ಭಾನುವಾರ ಮಧ್ಯಾಹ್ನ 2.30ಕ್ಕೆ ಇಂಫಾಲ್ ವಿಮಾನ ನಿಲ್ದಾಣದ ಬಳಿ ಯುಎಫ್‌ಒಗಳ ಹಾರಾಟದ ಮಾಹಿತಿ ಸಿಕ್ಕಿತು. ಈ ಮಾಹಿತಿ ಸಿಕ್ಕ ಕೂಡಲೇ ಭಾರತೀಯ ವಾಯು ಪಡೆಗೆ ಮಾಹಿತಿ ರವಾನೆ ಮಾಡಲಾಯ್ತು. ತ್ವರಿತವಾಗಿ ಅಖಾಡಕ್ಕೆ ಇಳಿದ ಭಾರತೀಯ ವಾಯು ಪಡೆ ತನ್ನ ಸಮೀಪದ ವಾಯು ನೆಲೆಯಿಂದ ಎರಡು ರಫೇಲ್ ಯುದ್ಧ ವಿಮಾನಗಳನ್ನು ಇಂಫಾಲ್ ವಿಮಾನ ನಿಲ್ದಾಣದತ್ತ ರವಾನಿಸಿತು ಎಂದು ಮೂಲಗಳು ಮಾಹಿತಿ ನೀಡಿವೆ.
UFO ವಿಡಿಯೋ ರಿಲೀಸ್ ಮಾಡಿದ ನಾಸಾ! ಆದ್ರೆ ಏಲಿಯನ್ಸ್ ಅಸ್ತಿತ್ವದ ಬಗ್ಗೆ ಇನ್ನೂ ಡೌಟ್!
ರಫೇಲ್ ಯುದ್ಧ ವಿಮಾನಗಳಲ್ಲಿ ಅತ್ಯಾಧುನಿಕ ಸೆನ್ಸಾರ್ ವ್ಯವಸ್ಥೆ ಇದೆ. ಈ ವಿಮಾನಗಳು ಯುಎಫ್‌ಒ ಹಾರಾಟ ನಡೆಸಿತು ಎನ್ನಲಾದ ಪ್ರದೇಶದಲ್ಲಿ ಅತ್ಯಂತ ತಳಮಟ್ಟದಲ್ಲಿಯೇ ಹಾರಾಟ ನಡೆಸಿ ಹುಡುಕಾಟ ನಡೆಸಿದವು. ಆದರೆ, ವಾಯು ಪಡೆ ಯುದ್ಧ ವಿಮಾನಗಳಿಗೆ ಯುಎಫ್‌ಒಗಳ ಇರುವಿಕೆ ಕುರಿತಾಗಿ ಯಾವುದೇ ಕುರುಹು ಲಭ್ಯ ಆಗಲಿಲ್ಲ ಎನ್ನಲಾಗಿದೆ.
ಭಾರತೀಯ ವಾಯು ಪಡೆಯು ಮೊದಲಿಗೆ ಒಂದು ರಫೇಲ್ ಯುದ್ಧ ವಿಮಾನ ರವಾನಿಸಿತ್ತು. ಈ ವಿಮಾನ ಹಿಂದಿರುಗುವ ವೇಳೆಗೆ ಮತ್ತೊಂದು ರಫೇಲ್ ಯುದ್ಧ ವಿಮಾನವನ್ನೂ ವಾಯು ಪಡೆ ರವಾನೆ ಮಾಡಿತು. ಎರಡೂ ಯುದ್ಧ ವಿಮಾನಗಳೂ ಯುಎಫ್‌ಒಗಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ತೀವ್ರ ಹುಡುಕಾಟ ನಡೆಸಿದವು. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ ಎಂದು ತಿಳಿದು ಬಂದಿದೆ.
ಇದೀಗ ತನಿಖಾ ಸಂಸ್ಥೆಗಳು ಯುಎಫ್‌ಒಗಳ ಫೋಟೋ, ವಿಡಿಯೋ ಸಿಗಬಹುದೇ ಎಂದು ಹುಡುಕಾಟ ನಡೆಸುತ್ತಿವೆ. ಇಂಫಾಲ್ ವಿಮಾನ ನಿಲ್ದಾಣದ ಬಳಿ ಯುಎಫ್‌ಒ ಹಾರಾಟ ನಡೆಸಿತು ಎಂಬ ಮಾಹಿತಿ ಲಭ್ಯ ಆಗಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರತೀಯ ವಾಯು ಪಡೆ ಸಿಸಿಟಿವಿ ಸೇರಿದಂತೆ ಯಾರಾದರೂ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿರಬಹುದೇ ಅನ್ನೋದನ್ನೂ ಪರಿಶೀಲಿಸಬಹುದಾಗಿದೆ.
ಇನ್ನು ವಿಮಾನ ನಿಲ್ಧಾಣದಲ್ಲಿ ವಿಮಾನಗಳ ಹಾರಾಟ ಪುನಾರಂಭಗೊಳಿಸುವ ವೇಳೆಗೆ ಭಾರತೀಯ ವಾಯು ಪಡೆ ತನ್ನ ವಾಯು ರಕ್ಷಣಾ ವ್ಯವಸ್ಥೆಯನ್ನೂ ಜಾಗೃತಗೊಳಿಸಿದೆ. ಈ ಸಂಬಂಧ ಶಿಲ್ಲಾಂಗ್ ಸೇನಾ ನೆಲೆ ಮಾಹಿತಿ ನೀಡಿದ್ದು, ಈ ಕುರಿತಾಗಿ ಯಾವುದೇ ಹೆಚ್ಚುವರಿ ವಿವರ ನೀಡಿಲ್ಲ. ಆದರೆ ಸಣ್ಣ ವಸ್ತುವೊಂದು ವಿಮಾನ ನಿಲ್ದಾಣದ ಮೇಲೆ ಹಾರಾಟ ನಡೆಸಿದೆ ಎಂದಷ್ಟೇ ಹೇಳಿದೆ.
ಅಮೆರಿಕ ಸರ್ಕಾರದ ವಶದಲ್ಲಿ ಅನ್ಯಗ್ರಹ ಜೀವಿಗಳು: ಮಾಜಿ ಗುಪ್ತಚರ ಅಧಿಕಾರಿ ಸ್ಫೋಟಕ ಹೇಳಿಕೆ
Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್ ಮಾಡಿಕೊಳ್ಳಿ ಹಾಗೂ ರಿಪೋರ್ಟ್ ಕಳಿಸಿ
Más historias